ಕೆಟ್ಟು ಮೂಲೆ ಸೇರಿದ ‘108’ ಆ್ಯಂಬುಲೆನ್ಸ್: ಬಡ ರೋಗಿಗಳಿಗೆ ಸಂಕಷ್ಟ

Update: 2024-05-13 07:14 GMT

ಗುಡಿಬಂಡೆ: ತಾಲೂಕಿನ ‘108’ ಆ್ಯಂಬುಲೆನ್ಸ್ ಗಳು ಕೆಟ್ಟು ಮೂಲೆ ಸೇರಿದ್ದು, ಬಡ ರೋಗಿಗಳು ಸಂಕಷ್ಟ ಅನುಭವಿಸುವಂತಾಗಿದೆ.

‘108’ಆ್ಯಂಬುಲೆನ್ಸ್ ಜಾರಿಯಾದ ಮೊದಲ ದಿನ ಗಳಲ್ಲಿ ಉತ್ತಮ ಸೇವೆಯನ್ನು ನೀಡಿದ್ದು, ಬರ ಬರುತ್ತಾ ಸೇವೆಯಲ್ಲೂ ವ್ಯತ್ಯಯವಾಗತೊಡಗಿದೆ. ಸಿಬ್ಬಂದಿಗೆ ವೇತನ ನೀಡದಿರುವುದು, ಆ್ಯಂಬುಲೆನ್ಸ್‌ನ ತಾಂತ್ರಿಕ ತೊಂದರೆಗಳನ್ನು ನೀಗಿಸದೇ ಇರುವುದು ಸೇವೆಯಲ್ಲಿನ ವ್ಯತ್ಯಯಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ತಾಲೂಕಿನಲ್ಲಿ ಸಣ್ಣ ಪುಟ್ಟ ತೊಂದರೆಯ ನಡುವೆಯೂ ಕೆಲ ದಿನಗಳವರೆಗೆ ಕಾರ್ಯನಿರ್ವಹಿಸುತ್ತಿದ್ದ ಆ್ಯಂಬುಲೆನ್ಸ್ ಕೆಟ್ಟು ಮೂಲೆ ಸೇರಿದ್ದು, 15 ದಿನಗಳಿಂದ ತಾಲೂಕಿನ ಜನತೆ ಈ ಸೇವೆಯಿಂದ ವಂಚಿತರಾಗಿದ್ದಾರೆ.

ತಾಲೂಕಿನ ಬಡ ರೋಗಿಗಳು, ಗರ್ಭಿಣಿ ಮಹಿಳೆಯರು ಇದೇ ಸೇವೆಯನ್ನು ಆಶ್ರಯಿಸಿದ್ದು, ಇದೀಗ ತೊಂದರೆ ಅನುಭವಿಸುವಂತಾಗಿದೆ. ಆ್ಯಂಬುಲೆನ್ಸ್‌ನಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡರೆ ಸರಿಪಡಿಸುತ್ತಿಲ್ಲ. ಕೆಲ ತಿಂಗಳುಗಳಿಂದ ಸಂಬಳ ಬಂದಿಲ್ಲ ಎಂದು ಸಿಬ್ಬಂದಿ ದೂರಿಕೊಂಡಿದ್ದಾರೆ.

‘108’ ಆ್ಯಂಬುಲೆನ್ಸ್ ದುರಸ್ತಿಯಲ್ಲಿದೆ. ಪರ್ಯಾಯವಾಗಿ ಎರಡು ಆ್ಯಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ. ಆ್ಯಂಬುಲೆನ್ಸ್ ಕೆಟ್ಟು ನಿಂತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಆದಷ್ಟು ಬೇಗ ಆ್ಯಂಬುಲೆನ್ಸ್‌ನ್ನು ಸರಿಪಡಿಸಿ ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು.

ಆರೋಗ್ಯ ಅಧಿಕಾರಿ, ಗುಡಿಬಂಡೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಲಕ್ಕೇನಹಳ್ಳಿ ಈಶ್ವರಪ್ಪ

contributor

Similar News