ಕರ್ನಾಟಕದ ಪರವಾಗಿ ಆಡಿದ ಜೋಫ್ರಾ ಆರ್ಚರ್; ಸಸೆಕ್ಸ್ ಬ್ಯಾಟರ್ ನ ಸ್ಟಂಪ್ ಮುರಿದ ಆಂಗ್ಲ ವೇಗಿ

Update: 2024-03-15 14:20 GMT

ಜೋಫ್ರಾ ಆರ್ಚರ್  | Photo:NDTV 

ಬೆಂಗಳೂರು: ಆಲೂರಿನ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಸಸೆಕ್ಸ್ ಕೌಂಟಿ ತಂಡದ ವಿರುದ್ಧ ನಡೆದ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಕರ್ನಾಟಕದ ತಂಡದ ಪರ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಆಟವಾಡಿ ಅಚ್ಚರಿ ಮೂಡಿಸಿದರು. ಅವರು 19 ವರ್ಷದೊಳಗಿನವರು, 23 ವರ್ಷದೊಳಗಿನವರು ಹಾಗೂ ಹಿರಿಯ ಕ್ರಿಕೆಟ್ ಆಟಗಾರರೊಂದಿಗೆ ಕರ್ನಾಟಕ ತಂಡದ ಪರವಾಗಿ ಬದಲಿ ಆಟಗಾರನಾಗಿ ಆಟವಾಡಿದರು. ಈ ನಡುವೆ, ಸಸೆಕ್ಸ್ ತಂಡವು 10 ದಿನಗಳ ಪೂರ್ವಭ್ಯಾಸ ಶಿಬಿರಕ್ಕಾಗಿ ಬೆಂಗಳೂರಿಗೆ ಆಗಮಿಸಿದೆ. ಅವರು ಸೌತ್ ಕೋಸ್ಟ್ ಗೆ ಹಿಂದಿರುಗುವುದಕ್ಕೂ ಮುನ್ನ ಬೆಂಗಳೂರಿನಲ್ಲಿ ಇನ್ನೂ ಒಂದೆರಡು ಅಭ್ಯಾಸ ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ.

ಅಭ್ಯಾಸ ಪಂದ್ಯದಲ್ಲಿ ಸಸೆಕ್ಸ್ ತಂಡವು ಬೌಲಿಂಗ್ ಆಯ್ದುಕೊಂಡರೂ, ಪಂದ್ಯದ ಪ್ರಾರಂಭದ ದಿನದಂದು ಆರ್ಚರ್ ಬೌಲಿಂಗ್ ಮಾಡಲಿಲ್ಲ. ಬದಲಿಗೆ ಕರ್ನಾಟಕ ತಂಡದ ಪರ ಬದಲಿ ಆಟಗಾರನಾಗಿ ಆಡಿದ ಅವರು ಎರಡು ವಿಕೆಟ್ ಗಳನ್ನು ಕಿತ್ತರು.

ಸುಮಾರು 12 ತಿಂಗಳಿನಿಂದ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಭಾಗವಹಿಸಿರದ ಆರ್ಚರ್, ಅಭ್ಯಾಸ ಪಂದ್ಯದಲ್ಲಿ ಉತ್ತಮ ಲಯದಲ್ಲಿರುವಂತೆ ಕಂಡು ಬಂದರಲ್ಲದೆ, ತಮ್ಮ ಸಸೆಕ್ಸ್ ತಂಡದ ಸಹ ಆಟಗಾರರ ಎರಡು ವಿಕೆಟ್ ಗಳನ್ನೂ ಕಿತ್ತರು. ಈ ಪೈಕಿ ಅವರು ಮಾಡಿದ ಒಂದು ಬಾಲ್ ಬ್ಯಾಟರ್ ನನ್ನು ವಂಚಿಸಿ, ಸ್ಟಂಪ್ ಅನ್ನೇ ಮುರಿದು ಹಾಕಿತು.

ಕಳೆದ ಐಪಿಎಲ್ ಪಂದ್ಯಾವಳಿಯಲ್ಲಿ ಮಾತ್ರ ಆರ್ಚರ್ ಸ್ಪರ್ಧಾತ್ಮಕ ಕ್ರಿಕೆಟ್ ನಲ್ಲಿ ಭಾಗವಹಿಸಿದ್ದರು. 2022ರ ಋತುವನ್ನು ತಪ್ಪಿಸಿಕೊಂಡ ನಂತರ ಆಡಿದ್ದ ಅವರು, ಐದು ಪಂದ್ಯಗಳಿಂದ ಕೇವಲ ಎರಡು ವಿಕೆಟ್ ಮಾತ್ರ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News