1,524 ದಿನಗಳ ನಂತರ ಶತಕ ಗಳಿಸಿದ ಶಾನ್ ಮಸೂದ್

Update: 2024-10-07 16:21 GMT

ಶಾನ್ ಮಸೂದ್ |  PC : NDTV  

ಮುಲ್ತಾನ್ : ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾನ್ ಮಸೂದ್ ಇಂಗ್ಲೆಂಡ್ ವಿರುದ್ಧ ಸೋಮವಾರ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ತನ್ನ ಐದನೇ ಶತಕವನ್ನು ಪೂರೈಸಿದರು. ಈ ಮೂಲಕ 1,524 ದಿನಗಳ ನಂತರ ಮೊದಲ ಶತಕ ಗಳಿಸಿದರು.

ಈ ಶತಕವು ಮಸೂದ್ ಪಾಲಿಗೆ ಭಾವನಾತ್ಮಕವಾಗಿದ್ದು, ಅಸ್ಥಿರ ಪ್ರದರ್ಶನದಿಂದಾಗಿ ಹಿನ್ನಡೆ ಕಂಡಿದ್ದ ಮಸೂದ್ ನಾಲ್ಕು ವರ್ಷಗಳಿಂದ ಶತಕದ ಬರ ಎದುರಿಸಿದ್ದರು.

ಮಸೂದ್ 2020ರಲ್ಲಿ ತನ್ನ ಕೊನೆಯ ಶತಕ ಗಳಿಸಿದ್ದರು. ಆಗ ಅವರು ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ 156 ರನ್ ಗಳಿಸಿದ್ದರು.

ಆ ನಂತರ ಮಸೂದ್ ಅವರು ರಾಷ್ಟ್ರೀಯ ತಂಡದಲ್ಲಿ ಒಳ, ಹೊರಗೆ ಹೋಗುತ್ತಿದ್ದರು. ಅಂತಿಮವಾಗಿ ತಂಡದ ನಾಯಕತ್ವ ಸ್ವೀಕರಿಸಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡರು.

ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಒಂದು ರನ್ ಕಲೆ ಹಾಕುವ ಮೂಲಕ ಮಸೂದ್ ತನ್ನದೇ ಶೈಲಿಯಲ್ಲಿ ಶತಕ ಪೂರ್ಣಗೊಳಿಸಿದರು. ಆಗ ಸಹ ಆಟಗಾರರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಶತಕ ತಲುಪಿದ ತಕ್ಷಣ ಪ್ರೇಕ್ಷಕರತ್ತ ಬ್ಯಾಟನ್ನು ಪ್ರದರ್ಶಿಸಿದ ಮಸೂದ್‌ಗೆ ಬ್ಯಾಟಿಂಗ್ ಜೊತೆಗಾರ ಅಬ್ದುಲ್ಲಾ ಶಫೀಕ್ ಆಲಿಂಗಿಸಿ ವಿಶೇಷ ಕ್ಷಣವನ್ನು ಹಂಚಿಕೊಂಡರು.

ಮಸೂದ್ ಅವರ ಟೆಸ್ಟ್ ಶತಕಗಳು

151-ಇಂಗ್ಲೆಂಡ್ ವಿರುದ್ಧ, ಮುಲ್ತಾನ್, 2024

156-ಇಂಗ್ಲೆಂಡ್ ವಿರುದ್ಧ, ಮ್ಯಾಂಚೆಸ್ಟರ್,2020

100-ಬಾಂಗ್ಲಾದೇಶ ವಿರುದ್ಧ ಕರಾಚಿ, 2019

135-ಶ್ರೀಲಂಕಾ ವಿರುದ್ಧ ಕರಾಚಿ, 2019

125-ಶ್ರೀಲಂಕಾ ವಿರುದ್ಧ ಪಲ್ಲೆಕೆಲೆ, 2015

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News