ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ಭಾಷಣ
Update: 2024-06-27 07:13 GMT
ಹೊಸದಿಲ್ಲಿ: ಇಂದು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ತಮ್ಮ ಭಾಷಣದಲ್ಲಿ ನೀಟ್ ಅವ್ಯವಹಾರಗಳ ಕುರಿತು ಉಲ್ಲೇಖಿಸಿ ಈ ಪ್ರಕರಣದ ನ್ಯಾಯಯುತ ತನಿಖೆಗೆ ಸರ್ಕಾರ ಬದ್ಧವಾಗಿದೆ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.
“ಇತ್ತೀಚಿನ ಅವ್ಯವಹಾರಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಹಾಗೂ ಸರ್ಕಾರ ಪರೀಕ್ಷಾ ಪ್ರಕ್ರಿಯೆಯನ್ನು ಸುಧಾರಿಸುವತ್ತ ಗಮನ ಹರಿಸಿದೆ,” ಎಂದು ಅವರು ಹೇಳಿದರು.
“ಇಂತಹ ಘಟನೆಗಳು (ಪ್ರಶ್ನೆಪತ್ರಿಕೆ ಸೋರಿಕೆ) ಹಲವು ರಾಜ್ಯಗಳಲ್ಲಿ ನಡೆದಿವೆ. ರಾಜಕೀಯವನ್ನು ಬದಿಗಿರಿಸಿ ಪರಿಹಾರೋಪಾಯಗಳನು ಕೈಗೊಳ್ಳಬೇಕಿದೆ,”ಎಂದು ರಾಷ್ಟ್ರಪತಿಗಳು ಹೇಳಿದರು.