ಇಂಟರ್ ನ್ಯಾಷನಲ್ ಲೀಗ್ ಟಿ20ಯಲ್ಲಿ ಅರೇಬಿಕ್‌ ಉಡುಪಿನಲ್ಲಿ ಕಂಡ ವೀರೇಂದ್ರ ಸೆಹ್ವಾಗ್

Update: 2024-02-17 17:41 GMT

ದುಬೈ : ಇಲ್ಲಿನ ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂಟರ್ ನ್ಯಾಷನಲ್ ಲೀಗ್ ಟಿ20 ಟೂರ್ನಿ ಆರಂಭವಾಗಿದೆ. ಈ ಪಂದ್ಯದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶುಐಬ್ ಅಖ್ತರ್ ಸೇರಿದಂತೆ ಭಾರತದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ವೀರೇಂದ್ರ ಸೆಹವಾಗ್ ಖಾಸಗಿ ಚಾನೆಲ್ ನ ಆಂಕರ್ ಗಳಾಗಿ ಫೀಲ್ಡಿಗಿಳಿದಿದ್ದಾರೆ. ಈ ಟೂರ್ನಿಯಲ್ಲಿ ಯುಎಇಯ ಸಾಂಪ್ರದಾಯಿಕ ಅರಬೀ ಉಡುಗೆ ತೊಟ್ಟಿರುವ ವೀರೇಂದ್ರ ಸೆಹ್ವಾಗ್ ಅವರ ವೀಡಿಯೊ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಕುರಿತು ಫೊಟೋ ಹಂಚಿಕೊಂಡಿರುವ

@RoshanKrRaii ಎನ್ನುವ x ಬಳಕೆದಾರರು, “ INDIA ಎಂಬ ಪದದಲ್ಲಿ ಅವರಿಗೆ ಸಮಸ್ಯೆ ಇದೆ, INDIA ಎಂದರೆ ದಬ್ಬಾಳಿಕೆ ಎಂದರ್ಥ. INDIA ಬದಲಿಗೆ ಭಾರತ ಪದ ಬಳಸಬೇಕು ಎಂದು ಹೇಳಿದ್ದರು. ಇಂದು ಅವರು ಹಣಕ್ಕಾಗಿ ಅರಬ್ ಆಗಿಬಿಟ್ಟಿದ್ದಾರೆ”, ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ

@ImJordanGaurav1 ಎನ್ನುವ ಬಳಕೆದಾರರು, “ತಂದೆಯೂ ದೊಡ್ಡವರಲ್ಲ, ಅಣ್ಣನೂ ಅಲ್ಲ. ಎಲ್ಲಕ್ಕಿಂತ ದೊಡ್ಡದು ಹಣ” ಎಂದು ಪೋಸ್ಟ್ ಮಾಡಿದ್ದಾರೆ.

@imaheshpatidar ಎನ್ನುವ ಬಳಕೆದಾರರು, “ಇವರೆಲ್ಲಾ ಒಂದು ದಿನ ಭಕ್ತರನ್ನೂ ಮುಸ್ಲಿಮರನ್ನಾಗಿ ಮಾಡುತ್ತಾರೆ. ಮೋದಿಯವರಿಗೂ ಅರಬ್ ಮುಸ್ಲಿಮರ ಬಗ್ಗೆ ಯಾವುದೇ ಸಮಸ್ಯೆಯಿಲ್ಲ” ಎಂದು ಹೇಳಿದ್ದಾರೆ.

@LalaLehri ಎನ್ನುವ ಬಳಕೆದಾರರು, ಕ್ರಿಕೆಟ್ ನ ಅಕ್ಷಯ್ ಕುಮಾರ್ ಎಂದು ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News