ಯಾದಗಿರಿ | ವಿದ್ಯಾರ್ಥಿಗಳು ದೇಶಿ ಕ್ರೀಡೆಯನ್ನು ಪ್ರೋತ್ಸಾಹಿಸಬೇಕು : ಹಣಮಂತ ಬಂಕಲಗ

Update: 2024-12-08 11:43 GMT

ಯಾದಗಿರಿ : ʼವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದಲ್ಲದೇ ದೇಶಿ ಕ್ರೀಡೆಯನ್ನು ಪ್ರೋತ್ಸಾಹಿಸಬೇಕು' ಎಂದು ಗ್ರಾಮೀಣ ಪಿಎಸ್ ಐ ಹಣಮಂತ ಬಂಕಲಗಿ ಹೇಳಿದ್ದಾರೆ.

ನಗರದ ಖಂಡೇಲವಾಲ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಪಟುಗಳಿಗೆ ಸಮಾಜದಲ್ಲಿ ದೊಡ್ಡ ಗೌರವ, ಸ್ಥಾನಮಾನಗಳು ಸಿಗುತ್ತವೆ. ಕ್ರೀಡೆಯಿಂದ ಏಕಾಗ್ರತೆ, ಶಿಸ್ತು, ಸಂಸ್ಕಾರ ಮೊದಲಾದ ಗುಣಗಳು ಕಲಿತುಕೊಳ್ಳಬಹುದು. ವಿದ್ಯಾರ್ಥಿಗಳು ಕೇವಲ ಓದಿಗೆ ಮೀಸಲಾಗಬಾರದು. ʼಕ್ರೀಡೆಯಲ್ಲಿ ಸೋಲು ಗೆಲುವು ಸಹಜವಾಗಿದ್ದು, ಭಾಗವಹಿಸುವಿಕೆ ಮುಖ್ಯವಾಗುತ್ತದೆ' ಎಂದು ತಿಳಿಸಿದರು.

ಜೀವನದಲ್ಲಿ ಗುರಿ ಸಾಧಿಸಲು ವಿದ್ಯಾರ್ಥಿಗಳು ಸತತ ಪರಿಶ್ರಮ, ಶ್ರದ್ಧೆ ಮತ್ತು ನಿಷ್ಠೆಯಿಂದ ಅಧ್ಯಯನ ಶೀಲರಾದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.

ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಹೊಸಮನಿ ಮಾತನಾಡಿ, ಕ್ರೀಡೆಯಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಪಾಲ್ಗೊಳ್ಳಬೇಕು ಸಲಹೆ ನೀಡಿದರು.

ಪತ್ರಕರ್ತ ಅರುಣಕುಮಾರ್ ಮಾಸನ್ ಮಾತನಾಡಿ, ಕ್ರೀಡೆ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಮನಸ್ಸಿಗೆ ಶಾಂತಿ ಮತ್ತು ಶಿಸ್ತನ್ನು ಒದಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ರೀಡೆಯು ಕ್ರೀಡಾ ವಿಜ್ಞಾನವಾಗಿ ವಿಸ್ತಾರಗೊಂಡಿದ್ದು, ಆರೋಗ್ಯ ಮತ್ತು ಜೀವನಶೈಲಿಯಲ್ಲಿ ಅದರ ಪ್ರಾಮುಖ್ಯತೆಯನ್ನು ತೋರಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರಾದ ಸರಳ ಓಂ ವಹಿಸಿದರು. ಕ್ರೀಡೆಯಲ್ಲಿ ವಿಜೇತ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಚಿನ್ನದ ಪದಕ, ಬೆಳ್ಳಿ ಪದಕ ಮತ್ತು ಕಂಚಿನ ಪದಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಖಂಡೆಲ್ ವಾಲ್ ಶಾಲಾ ಸಂಸ್ಥೆಯ ಸದಸ್ಯೆ ಚಂದ್ರಕಲಾ ಖಂಡೆಲ್ ವಾಲ್, ಪ್ರಾಂಶುಪಾಲರು ಉಷಾ ಗಣಪತಿ , ಸಾವಿತ್ರಿಬಾಯಿ ಖಂಡೆಲ್ ವಾಲ್, ಅಂಬಿಕಾ, ದೈಹಿಕ ಶಿಕ್ಷಕರ ಆದಂತ ನಾಗೇಶ್ ನಾಯಕ್, ಸುಷ್ಮಾ ಅನಿಲ್ ಕಲಾಲ್, ಮಲ್ಲಿಕಾರ್ಜುನ್, ಹರ್ಷವರ್ಧನ್ ಠಾಕೂರ್, ಶ್ವೇತಾ, ಸುಮಂಗಲ, ವಾಣಿಶ್ರೀ, ಕವಿತಾ ಶರ್ಮ, ಅಶ್ವಿನಿ ಗೋಣಿ ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News