ಬಜಾಲ್: ಮನೆ ಕುಸಿತ; ಅಪಾಯದಿಂದ ಪಾರಾದ ಅಜ್ಜಿ-ಮೊಮ್ಮಗಳು

Update: 2024-08-01 08:56 GMT

ಮಂಗಳೂರು: ನಿರಂತರ ಸುರಿಯುತ್ತಿರುವ ಮಳೆಗೆ ಮನೆಯೊಂದು ಕುಸಿದು, ಮನೆಯಲ್ಲಿದ್ದ ಅಜ್ಜಿ ಮತ್ತು ಮೊಮ್ಮಗಳು ಅಪಾಯದಿಂದ ಪಾರಾದ ಘಟನೆ ನಗರ ಹೊರವಲಯದ ಬಜಾಲ್ ಫೈಸಲ್ ನಗರ ಎಂಬಲ್ಲಿ  ಗುರುವಾರ ಮಧ್ಯಾಹ್ನ ನಡೆದಿದೆ.

ಯಮುನಾ ಎಂಬವರಿಗೆ ಸೇರಿದ ಈ ಮನೆ ಕುಸಿಯುವ ವೇಳೆ ಯಮುನಾರ ತಾಯಿ ಮತ್ತು ಮಗಳು ಇದ್ದರೆನ್ನಲಾಗಿದೆ. ಮನೆ ಸಂಪೂರ್ಣ ಕುಸಿದಿದ್ದು, ಸ್ಥಳೀಯ ಕಾರ್ಪೊರೇಟರ್ ಅಶ್ರಫ್ ಬಜಾಲ್ ಭೇಟಿ ನೀಡಿದ್ದಾರೆ.


Delete Edit



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News