ರಾಯಚೂರು | ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕುವೆಂಪು ಜನ್ಮದಿನಾಚರಣೆ
ರಾಯಚೂರು : ವಿಶ್ವಮಾನವ ಸಂದೇಶ ಸಾರಿದ ಜಗದ ಕವಿ ಯುಗದ ಕವಿ ಕುವೆಂಪು ನಮ್ಮ ನಾಡಿನ ಶ್ರೇಷ್ಠ ಸಾಹಿತಿ ಮತ್ತು ತತ್ವಜ್ಞಾನಿ ಎಂದು ರಾಯಚೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೆಂಕಟೇಶ್ ಬೇವಿನಬೆಂಚಿ ಹೇಳಿದರು.
ಅವರು ನಗರದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ʼಯುಗದ ಕವಿ ಕುವೆಂಪು ಅವರ ಜನ್ಮದಿನಾಚರಣೆʼ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುವೆಂಪು ಕನ್ನಡ ನಾಡಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕವಿ, ಸಾಹಿತ್ಯದ ಮೇರು ಪರ್ವತ ಅವರ ಸಾಹಿತ್ಯ ಕೃಷಿಯಿಂದ ನಮ್ಮ ನಾಡು ಸಾಹಿತ್ಯಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ಗೊಂಡಿದೆ ಎಂದರು.
ಕನ್ನಡ ಭಾಷೆ ಬಗ್ಗೆ, ನೆಲದ ಬಗ್ಗೆ ಶ್ರೇಷ್ಟ ಚಿಂತನೆಗಳನ್ನು ಹರಡಿ ಎಲ್ಲಿಯಾದರೂ ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹೇಳಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸಿದ ಕವಿ ಕುವೆಂಪು, ಅವರ ವೈಚಾರಿಕ ವಿಚಾರಗಳು ನಮಗೆ ದಾರಿದೀಪವಾಗಿವೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಕಲಾವಿದ ಹೆಚ್.ಹೆಚ್ ಮ್ಯಾದಾರ್ ಅವರು ಮಾತನಾಡಿ, ಕುವೆಂಪು ಅವರು ಬರೆದ ಮಹಾಕಾವ್ಯಗಳು ನಮಗೆ ಮಾರ್ಗದರ್ಶಿಯಾಗಿದೆ. ನಮ್ಮ ನಾಡಿನ ಕನ್ನಡ ಪ್ರೇಮಿಗಳು ಪ್ರೀತಿಯಿಂದ ಅಪ್ಪಿಕೊಂಡು ಅವರನ್ನು ಗೌರವದಿಂದ ಪೂಜಿಸುವ ಮೂಲಕ ಗೌರವ ಸಲ್ಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಮಣ್ಣ ಬೋಯರ, ಆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಅಶೋಕ ಮತ್ತು ರೇಖಾ ಪಾಟೀಲ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ರೇಖಾ ಬಡಿಗೇರ್, ಯಲ್ಲಪ್ಪ ಮರ್ಚೆಡ, ವಸಂತ ಕುಮಾರ, ದಂಡಪ್ಪ ಬಿರಾದಾರ, ಎಸ್ ಕೆ ಈ ಪ್ಯಾರಾ ಮೆಡಿಕಲ್ ಕಾಲೇಜ್ ಉಪನ್ಯಾಸಕಾರದ ಶರಣಪ್ಪ ಮತ್ತು ವಿದ್ಯಾರ್ಥಿಗಳು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಿದ್ದರು. ಗೌರವ ಕಾರ್ಯದರ್ಶಿ ರಾವುತರಾವ್ ಬರೂರ ನಿರೂಪಿಸಿದರು, ವೈಶಾಲಿ ಪಾಟೀಲ್ ವಂದಿಸಿದರು.