ರಾಯಚೂರು | ಡಿ.ಎಚ್.ಪುಜಾರ್ ಅವರನ್ನು ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಮಾಡಿರುವುದು ಅವರ ಹೋರಾಟಕ್ಕೆ ಸಂದ ಜಯ: ಬಾಲಸ್ವಾಮಿ
ರಾಯಚೂರು : ಜಿಲ್ಲೆಯ ಎಡದಂಡೆ ಕಾಲುವೆ ಕೊನೆ ಭಾಗದ ರೈತರ ಸಮಸ್ಯೆಗೆ ಹೋರಾಡಿದ ಹೋರಾಟಗಾರ ‘ಡಿ.ಎಚ್.ಪೂಜಾರ್ ಅವರನ್ನು ರಾಜ್ಯ ಕೃಷಿ ಬೆಲೆ ಆಯೋಗಕ್ಕೆ ಸದಸ್ಯರನ್ನಾಗಿ ಸರ್ಕಾಕ ನೇಮಕ ಮಾಡಿರುವುದು ಅವರ ಹೋರಾಟಕ್ಕೆ ಸಂದ ಗೌರವವಾಗಿದೆ’ ಎಂದು ಬಾಲಸ್ವಾಮಿ ಜಾಲವಾಡಗಿ ವಕೀಲ ಅಭಿಪ್ರಾಯಪಟ್ಟರು.
ಸಿಂಧನೂರಿನ ನಗರದ ಪ್ರವಾಸಿ ಮಂದಿರದಲ್ಲಿ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಡದಂಡೆ ನಾಲೆಗೆ ಸಮರ್ಪಕವಾಗಿ ನೀರು ಹರಿಸದಿದ್ದಾಗ, ಬೆಳೆ ನಷ್ಟ ಉಂಟಾದಾಗ, ಬೆಳೆಗಳಿಗೆ ಯೋಗ್ಯ ಬೆಲೆ ಸಿಗದ ಸಮಯದಲ್ಲಿ ಪೂಜಾರ್ ಅವರು ರೈತರ ಪರವಾಗಿ ಹೋರಾಡುತ್ತ ಬಂದಿದ್ದಾರೆ ಎಂದರು.
ರೈತ ಸಂಘದ ಮುಖಂಡ ಬಿ.ಲಿಂಗಪ್ಪ, ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಭಾಗದ ವಕ್ತಾರ ಹೊಳೆಯಪ್ಪ ದಿದ್ದಗಿ, ರೈತ ಸಂಘದ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರ್ಗಿ, ಟಿಯುಸಿಐ ಮುಖಂಡರಾದ ಬಿ.ಎನ್. ಯರದಿಹಾಳ, ಅಮಿನ್‍ಸಾಬ, ಸಿಪಿಎಂ ಸದಸ್ಯ ಶಿವಮೂರ್ತಿಸ್ವಾಮಿ ತಿಡಿಗೋಳ, ಹನುಮಂತಪ್ಪ ವಕೀಲ ಮಲ್ಲಾಪುರ, ಎಂ.ಡಿ.ಯಾಸಿನ್, ಮೌಲಾಸಾಬ್ ಉಪಸ್ಥಿತರಿದ್ದರು.