50 ಮೀಟರ್ ರೈಫಲ್ 3 ಪೊಸಿಶನ್ಸ್: ಸ್ವಪ್ನಿಲ್ ಕುಸಾಲೆ ಅಂತಿಮ ಸುತ್ತಿಗೆ

Update: 2024-07-31 15:37 GMT

ಸ್ವಪ್ನಿಲ್ ಕುಸಾಲೆ 

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ, ಬುಧವಾರ ಭಾರತದ ಸ್ವಪ್ನಿಲ್ ಕುಸಾಲೆ ಪುರುಷರ 50 ಮೀಟರ್ ರೈಫಲ್ 3 ಪೊಸಿಶನ್ಸ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದು ಫೈನಲ್ಸ್ ಪ್ರವೇಶಿಸಿದ್ದಾರೆ. ಆದರೆ, ಭಾರತದವರೇ ಆದ ಐಶ್ವರಿ ತೋಮರ್ 11ನೇ ಸ್ಥಾನ ಪಡೆದು ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

ಅರ್ಹತಾ ಸುತ್ತಿನಲ್ಲಿದ್ದ 44 ಸ್ಪರ್ಧಿಗಳ ಪೈಕಿ ಅಗ್ರ 8 ಮಂದಿ ಅಂತಿಮ ಸುತ್ತು ತಲುಪಿದ್ದಾರೆ. ಕುಸಾಲೆ ನೀಲಿಂಗ್ ಪೊಸಿಶನ್ ನಲ್ಲಿ 198 (99, 99), ಪ್ರೋನ್ ಪೊಸಿಶನ್ ನಲ್ಲಿ 197 (98, 99) ಮತ್ತು ಸ್ಟ್ಯಾಂಡಿಂಗ್ ಪೊಸಿಶನ್ ನಲ್ಲಿ 195 (98, 97) ಅಂಕಗಳನ್ನು ಗಳಿಸಿದರು. ಅವರು ಒಟ್ಟು 590 (38x) ಅಂಕಗಳನ್ನು ಗಳಿಸಿದರು. ತೋಮರ್ ನೀಲಿಂಗ್ ಪೊಸಿಶನ್ ನಲ್ಲಿ 197 (98, 99), ಪ್ರೋನ್ ಪೊಸಿಶನ್ ನಲ್ಲಿ 199 (100, 99) ಮತ್ತು ಸ್ಟ್ಯಾಂಡಿಂಗ್ ಪೊಸಿಶನ್ ನಲ್ಲಿ 193 (95, 98) ಅಂಕಗಳನ್ನು ಗಳಿಸಿದರು. ಈ ಮೂಲಕ ಅವರು ಒಟ್ಟು 589 (38x) ಅಂಕಗಳನ್ನು ಗಳಿಸಿದರು.

50 ಮೀಟರ್ ರೈಫಲ್ 3 ಪೊಸಿಶನ್ಸ್ ಸ್ಪರ್ಧೆಯ ಫೈನಲ್ಸ್ ಗುರುವಾರ ನಡೆಯಲಿದೆ.

ಚೀನಾದ ಲಿಯು ಯುಕುನ್ ಒಟ್ಟು 594 ಅಂಕಗಳೊAದಿಗೆ ಮೊದಲ ಸ್ಥಾನ ಗಳಿಸಿದರು. ನಾರ್ವೆಯ ಜಾನ್-ಹರ್ಮನ್ ಹೆಗ್ 593 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು.

ಕಳೆದ ವರ್ಷ ಹಾಂಗ್ಝೂನಲ್ಲಿ ನಡೆದದ ಏಶ್ಯನ್ ಗೇಮ್ಸ್ನಲ್ಲಿ, 50 ಮೀಟರ್ ರೈಫಲ್ 3 ಪೊಸಿಶನ್ಸ್ ತಂಡ ಸ್ಪರ್ಧೆಯಲ್ಲಿ ಕುಸಾಳೆ, ತೋಮರ್ ಮತ್ತು ಅಖಿಲ್ ಶೆವೊರಾನ್ ಅವರನ್ನೊಳಗೊಂಡ ಭಾರತೀಯ ತಂಡವು ಚಿನ್ನ ಗೆದ್ದಿತ್ತು.

ಏಶ್ಯನ್ ಗೇಮ್ಸ್ ನ 50 ಮೀಟರ್ ರೈಫಲ್ 3 ಪೊಸಿಶನ್ಸ್ ಸ್ಪರ್ಧೆಯಲ್ಲಿ, ಕುಸಾಳೆ ನಾಲ್ಕನೇ ಸ್ಥಾನ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News