ಪ್ಯಾರಿಸ್ ಒಲಿಂಪಿಕ್ಸ್ 2024 | ಫೈನಲ್ ಪ್ರವೇಶಿಸಿದ ಶೂಟರ್ ಸ್ವಪ್ನಿಲ್ ಕುಸಾಲೆ

Update: 2024-08-01 05:16 GMT

 ಸ್ವಪ್ನಿಲ್ ಕುಸಾಲೆ , ಎಂ.ಎಸ್.ಧೋನಿ | PC : PTI 

ಪ್ಯಾರಿಸ್: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಯಂತೆಯೇ ರೈಲ್ವೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿರುವ ಸ್ವಪ್ನಿಲ್ ಕುಸಾಲೆ, ಒಲಿಂಪಿಕ್ಸ್ ಕ್ರೀಡಾಕೂಟದ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದರು.

ಬುಧವಾರ ನಡೆದ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಭಾರತೀಯ ಶೂಟರ್ ಸ್ವಪ್ನಿಲ್ ಕುಸಾಲೆ ಮೊದಲ ಮೂವರ ಪೈಕಿ ಒಬ್ಬರಾಗುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟರು. ಆ ಮೂಲಕ ಗುರುವಾರ ನಡೆಯಲಿರುವ ಫೈನಲ್ ನಲ್ಲಿ ಭಾರತಕ್ಕೆ ಪದಕವೊಂದನ್ನು ಖಾತರಿ ಪಡಿಸಿದರು.

ಮಹಾರಾಷ್ಟ್ರದ ಕೊಲ್ಹಾಪುರದ ಬಳಿಯ ಕಂಬಲ್ವಾಡಿ ಗ್ರಾಮದ ನಿವಾಸಿಯಾದ 29 ವರ್ಷದ ಸ್ವಪ್ನಿಲ್ ಕುಸಾಲೆ 2012ರಿಂದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಾ ಬರುತ್ತಿದ್ದರೂ, ಪ್ಯಾರಿಸ್ ಒಲಿಂಪಿಕ್ಸ್ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಪದಾರ್ಪಣೆ ಮಾಡಲು 12 ವರ್ಷ ಕಾಯಬೇಕಾಯಿತು.

ಶಾಂತಿ ಹಾಗೂ ತಾಳ್ಮೆಯಿಂದಿರುವುದು ಯಾವುದೇ ಶೂಟರ್ ನ ಎರಡು ಪೂರ್ವಾರ್ಹತೆಯಾಗಿದ್ದು, ಈ ಎರಡು ಗುಣಗಳು ಧೋನಿ ವ್ಯಕ್ತಿತ್ವದ ಪ್ರಮುಖ ಸಂಗತಿಗಳೂ ಆಗಿದ್ದವು. ಹೀಗಾಗಿ ಕುಸಾಲೆ ಜೀವನ ಪಯಣವನ್ನು ಧೋನಿಯ ಜೀವನ ಪಯಣದೊಂದಿಗೆ ಹೋಲಿಕೆ ಮಾಡುವುದರಲ್ಲಿ ಯಾವುದೇ ಅಚ್ಚರಿ ಇಲ್ಲ. ಭಾರತದ ಕ್ರಿಕೆಟ್ ನ ದಂತಕತೆ ಮಹೇಂದ್ರ ಸಿಂಗ್ ಧೋನಿಯವರ ಜೀವನಾಧಾರಿತ ಚಿತ್ರವನ್ನು ನೋಡಿರುವ ಕುಸಾಲೆ, ತಾನೂ ಅವರಂತೆ ದೊಡ್ಡ ಸಾಧನೆ ಮಾಡುವ ತವಕದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News