ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ | ಸಿಎಂ ಸೇರಿ ಗಣ್ಯರಿದ್ದ ವೇದಿಕೆಗೆ ದಿಢೀರ್ ಜಿಗಿದು ಬಂದ ಯುವಕನ ಬಂಧನ

Update: 2024-09-15 12:12 IST
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ | ಸಿಎಂ ಸೇರಿ ಗಣ್ಯರಿದ್ದ ವೇದಿಕೆಗೆ ದಿಢೀರ್ ಜಿಗಿದು ಬಂದ ಯುವಕನ ಬಂಧನ

ಅಂತಾರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

  • whatsapp icon

ಬೆಂಗಳೂರು : ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ವೇದಿಕೆಗೆ ಯುವಕನೊಬ್ಬ ಏಕಾಏಕಿ ಜಿಗಿದು ಬಂದಿದ್ದು, ಗಣ್ಯರಲ್ಲಿ ಆತಂಕ ಸೃಷ್ಟಿಸಿದ್ದಾನೆ.

ರವಿವಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯುತ್ತಿದ್ದ ಕಾರ್ಯಕ್ರಮದ ವೇದಿಕೆ ಮೇಲೆ ಯುವಕನೊಬ್ಬ ಕನ್ನಡದ ಶಾಲು ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನುಗ್ಗಲು ಯತ್ನಿಸಿದ್ದು, ಭದ್ರತಾ ಲೋಪ ಆರೋಪ ಕೇಳಿಬಂದಿದೆ.

ಕನ್ನಡ ಶಾಲು ಹಾಕಲು ಬಂದ ಯುವಕನನ್ನು ಬನಶಂಕರಿಯ ಮಹಾದೇವ ನಾಯಕ್ ಎಂದು ತಿಳಿದು ಬಂದಿದೆ.

ಈ ವೇಳೆ ಮುಖ್ಯಮಂತ್ರಿಗಳ ಅಂಗರಕ್ಷಕರು ಕೂಡಲೇ ಯುವಕನನ್ನ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದರೂ ಯುವಕ ಸಿಎಂ ಕಡೆ ಶಾಲು ಎಸೆದಿದ್ದಾನೆ. ಸದ್ಯ ಮಹದೇವ್‌ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News