ಅಧಿವೇಶನ | ಹೊಸ ಜಿಲ್ಲೆಗಳ ಘೋಷಣೆ ಸದ್ಯಕ್ಕಿಲ್ಲ : ಸಚಿವ ಕೃಷ್ಣ ಬೈರೇಗೌಡ

Update: 2025-03-04 21:51 IST
ಅಧಿವೇಶನ | ಹೊಸ ಜಿಲ್ಲೆಗಳ ಘೋಷಣೆ ಸದ್ಯಕ್ಕಿಲ್ಲ : ಸಚಿವ ಕೃಷ್ಣ ಬೈರೇಗೌಡ

 ಕೃಷ್ಣ ಬೈರೇಗೌಡ

  • whatsapp icon

ಬೆಂಗಳೂರು : ಹೊಸ ಜಿಲ್ಲೆ ಅಥವಾ ತಾಲೂಕುಗಳನ್ನು ರಚಿಸುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಯಲ್ಲಿ ಕಾಂಗ್ರೆಸ್ ಸದಸ್ಯ ಯಶವಂತರಾಯಗೌಡ ಪಾಟೀಲ್, ತಮ್ಮ ಕ್ಷೇತ್ರ ಇಂಡಿ ಅನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಸರಕಾರಕ್ಕೆ ಮನವಿ ಮಾಡಿದರು.

ಈ ವೇಳೆ ಉತ್ತರ ನೀಡಿದ ಕೃಷ್ಣ ಬೈರೇಗೌಡ, ಜನಗಣತಿ ಸಂದರ್ಭದಲ್ಲಿ ಯಾವ ರಾಜ್ಯಗಳೂ ಹೊಸ ಕಂದಾಯ ಜಿಲ್ಲೆ ಘೋಷಿಸಬಾರದು ಎಂದು ಕೇಂದ್ರ ಸರಕಾರದ ನಿಯಮವಿದೆ. ಅಲ್ಲದೆ ರಾಜ್ಯ ಸರಕಾರದ ಮುಂದೆಯೂ ಯಾವುದೇ ಹೊಸ ಜಿಲ್ಲೆ ಅಥವಾ ತಾಲೂಕು ರಚನೆಯ ಪ್ರಸ್ತಾವನೆ ಇಲ್ಲ ಎಂದರು.

ಮುಂದುವರೆದು, ಒಂದೆರಡು ತಾಲೂಕುಗಳಿಂದ ಜಿಲ್ಲಾ ಕೇಂದ್ರ ರಚನೆಯ ಕೋರಿಕೆ ಇದೆ. ಭವಿಷ್ಯದಲ್ಲಿ ಇಂತಹ ಸಾಧ್ಯತೆ ಎದುರಾದರೆ ಖಂಡಿತ ಇಂಡಿ ತಾಲೂಕನ್ನು ಪರಿಗಣಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News